
Udiyakki Hakatara

ಗಂಡು:-ಉಡಿಯಕ್ಕಿ ಹಾಕತಾರ ||2||
ಊರ ಬಿಟ್ಟು ಕಳಿಸತ್ತಾರ.
ಗಂಡು ಸಂಗಡಿಗರು:-ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತ್ತಾರ.
ಗಂಡು:-ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತ್ತಾರ.
ಗಂಡು ಸಂಗಡಿಗರು:-ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತ್ತಾರ.
ಗಂಡು:-ಉಡಿಯಕ್ಕಿ ಹಾಕತಾರ ಊರ ಬಿಟ್ಟು ಕಳಿಸತ್ತಾರ. ಬಿಕ್ಕಿ ಬಿಕ್ಕಿ....ಬಿಕ್ಕಿ ಬಿಕ್ಕಿ ಅಳಬ್ಯಾಡ. ನೀ ಮರಿಬ್ಯಾಡ ನನ್ನ ಹೆಸರ.
ಹೆಣ್ಣು ಸಂಗಡಿಗರು:-ಉಡಿಯಕ್ಕಿ ಹಾಕು ತನಕ ನೀ ಎಲ್ಲಿದ್ದೋ ಜೋಕುಮಾರ..||2||
ಹೆಣ್ಣು:-ಉಡಿಯಕ್ಕಿ ಹಾಕು ತನಕ ನೀ ಎಲ್ಲಿದ್ದೋ ಜೋಕುಮಾರ..
ಹೆಣ್ಣು ಸಂಗಡಿಗರು:-ಉಡಿಯಕ್ಕಿ ಹಾಕು ತನಕ ನೀ ಎಲ್ಲಿದ್ದೋ ಜೋಕುಮಾರ..
ಹೆಣ್ಣು:-ಉಡಿಯಕ್ಕಿ ಹಾಕು ತನಕ ನೀ ಎಲ್ಲಿದ್ದೋ ಜೋಕುಮಾರ. ಮದವಿಯಾದ...ಮದವಿಯಾದ..
ಏ ಮದುವೆಯಾದ ಗಂಡನ ಹೊರತ ನೆನಪಿಲ್ಲೋ ಯಾರ ಹೆಸರ.
ಹೆಣ್ಣು ಸಂಗಡಿಗರು:-ಮದುವೆಯಾದ ಗಂಡನ ಹೊರತ ನೆನಪಿಲ್ಲೋ ಯಾರ ಹೆಸರ.
ಹೆಣ್ಣು:-ಉಡಿಯಕ್ಕಿ ಹಾಕು ತನಕ ಎಲ್ಲಿದ್ದೋ ಜೋಕುಮಾರ..//ಪಲ್ಲವಿ//
ಗಂಡು:-ಮಣಿಮುಂದ ಹಾಕಿ ಹಂದರ. ನಡದೈತಿ ಬಾರಿ ಸಡಗರ.
ಗಂಡು ಸಂಗಡಿಗರು:-ಮಣಿಮುಂದ ಹಾಕಿ ಹಂದರ. ನಡದೈತಿ ಬಾರಿ ಸಡಗರ.
(ಗಂಡು:-ಏ ನೀನು ಹೇಳಿದರೆ ಹೂಗಳೇನು ಗೆಳತಿ||. ಚುಕ್ಕಿಗಳ ಹಂದರವನ್ನೇ ಹಾಕುತ್ತಿದ್ದೆ ಗೆಳತಿ. ನಿನ್ನ ಮದುವೆಯ ಸಡಗರದಿ ನನ್ನೇ ಮರೆತಲ್ಲೇ ll ಗೆಳತಿ. ನೀನು ಕೇಳಿದ್ದರೆ ನನ್ನ ಪ್ರಾಣವನ್ನೇ ಕೊಡುತ್ತಿದ್ದೆ ಗೆಳತಿ)
ಗಂಡು:-ನನ್ನ ಮನಸ್ಸು ನೀ ಮುರುದಿ. ಮೂರಬಟ್ಟಿ ಮಾಡಿ ನಡದಿ.
ಗಂಡು ಸಂಗಡಿಗರು:-ನನ್ನ ಮನಸ್ಸು ನೀ ಮುರುದಿ. ಮೂರಬಟ್ಟಿ ಮಾಡಿ ನಡದಿ.
ಗಂಡು:-ನನ್ನ ಮನಸ್ಸು ನೀ ಮುರುದಿ. ಮೂರಬಟ್ಟಿ ಮಾಡಿ ನಡದಿ. ನಾಳೆ ನಾನು ll ನಾಳೆ ನಾನು ಸತ್ತ ಮ್ಯಾಗ ಯಾರ ಹೆಸರ ಮ್ಯಾಲ ಅಳತಿ.
ಗಂಡು ಸಂಗಡಿಗರು:-ನಾಳೆ ನಾನು ಸತ್ತ ಮ್ಯಾಗ ಯಾರ ಹೆಸರ ಮ್ಯಾಲ ಅಳತಿ.
ಗಂಡು:-ಹಸಿರು ಬಳೆ ತೊಡಿಸತಾರ. ಉಡಿಯ ತುಂಬಿ ಕಳಿಸುತ್ತಾರ.
ಗಂಡು ಸಂಗಡಿಗರು:-ಹಸಿರು ಬಳೆ ತೊಡಿಸತಾರ. ಉಡಿಯ ತುಂಬಿ ಕಳಿಸುತ್ತಾರ. //ಚರಣ ೧//
ಹೆಣ್ಣು:-ಮನಸಾರೆ ಪ್ರೀತಿ ಮಾಡಲಿಲ್ಲ. ನಿನ್ನ ಪ್ರೀತಿ ಉಳಿಯಲಿಲ್ಲ.
ಹೆಣ್ಣು ಸಂಗಡಿಗರು:-ಮನಸಾರೆ ಪ್ರೀತಿ ಮಾಡಲಿಲ್ಲ. ನಿನ್ನ ಪ್ರೀತಿ ಉಳಿಯಲಿಲ್ಲ.
(ಹೆಣ್ಣು:-ಪ್ರೇಮದ ಆಟದೊಳಗೆ ಹಾಳಾಯಿತು ಈ ಹುಡುಗಿ ll. ಹರಿತ ಚೂರಿಯ ಕೈಗೆ ಸಿಕ್ಕು ನೂರು ಹೋಳಾಯಿತು ಹುಡುಗಿ. ನಂಬಿದಳು ಅಂಬಿಗನೇ ದಾಟಲು ತೀರವನು ll ನಡು ನೀರಿನಲ್ಲಿ ಮುಳುಗಿಸಿ ದೇ ಪ್ರೀತಿಯ ದೋನಿಯನ್ನು ll.)
ಹೆಣ್ಣು:-ಮನಸಾರೆ ಪ್ರೀತಿ ಮಾಡಲಿಲ್ಲ. ನಿನ್ನ ಪ್ರೀತಿ ಉಳಿಯಲಿಲ್ಲ.
ಹೆಣ್ಣು ಸಂಗಡಿಗರು:-ಮನಸಾರೆ ಪ್ರೀತಿ ಮಾಡಲಿಲ್ಲ. ನಿನ್ನ ಪ್ರೀತಿ ಉಳಿಯಲಿಲ್ಲ.
ಹೆಣ್ಣು:-ಆ ಪ್ರೀತಿ ಉಳಿಯಲಿಲ್ಲ. ನಿನಗ್ಯಾಕ ತಿಳಿಯಲಿಲ್ಲ. ಸುಳ್ಳು ಸೋಗ...ಸುಳ್ಳು ಸೋಗ. ಸುಳ್ಳು ಸೋಗ ನಿ ಹಾಕಿದಿ. ಮಾಡೋದೆಲ್ಲ ನೀ ಮಾಡಿದಿ.
ಹೆಣ್ಣು ಸಂಗಡಿಗರು:-ಸುಳ್ಳು ಸೋಗ ನಿ ಹಾಕಿದಿ. ಮಾಡೋದೆಲ್ಲ ನೀ ಮಾಡಿದಿ.
ಹೆಣ್ಣು:-ಉಡಿಯಕ್ಕಿ ಹಾಕು ತನಕ ಎಲ್ಲಿದ್ದೋ ಜೋಕುಮಾರ..
ಹೆಣ್ಣು ಸಂಗಡಿಗರು:-ಉಡಿಯಕ್ಕಿ ಹಾಕು ತನಕ ಎಲ್ಲಿದ್ದೋ ಜೋಕುಮಾರ..//ಚರಣ ೨//
ಹೆಣ್ಣು:-ಹುಡುಗಾಟ ಮಾಡಬ್ಯಾಡ. ಸುಳ್ಳ ನನ್ನ ಕಾಡಬ್ಯಾಡ.
ಹೆಣ್ಣು ಸಂಗಡಿಗರು:-ಹುಡುಗಾಟ ಮಾಡಬ್ಯಾಡ. ಸುಳ್ಳ ಹುಡಗಿಯನ್ನು ಕಾಡಬ್ಯಾಡ.
(ಹೆಣ್ಣು:- ಆಸೆಪಟ್ಟು ನೋಡದಿರು ಗೆಳೆಯ ಈ ದಿಕ್ಕಿಗೆ ||ಈ ಹಕ್ಕಿ ಬರಲಾರದು ನಿನ್ನ ತೆಕ್ಕೆಗೆ. ನಾನೊಂದು ದಿಕ್ಕಿಗೆ ನೀನೊಂದು ದಿಕ್ಕಿಗೆ||. ನಾ ಹ್ಯಾಂಗ ಬರಲಿ ಹೇಳೋ ಗೆಳೆಯ|| . ಆ ನಿನ್ನ ತೆಕ್ಕೆಗೆ.)
ಹೆಣ್ಣು:-ಪ್ರೀತಿ ಮಾಡಿ ಮರಿಬಾರ್ದು. ಮಧವಿ ಇಲ್ದ ಉಳಿಬಾರದು.
ಹೆಣ್ಣು ಸಂಗಡಿಗರು:-ಪ್ರೀತಿ ಮಾಡಿ ಮರಿಬಾರ್ದು. ಮಧವಿ ಇಲ್ದ ಉಳಿಬಾರದು.
ಹೆಣ್ಣು:-ಪ್ರೀತಿ ಮಾಡಿ ಮರಿಬಾರ್ದು. ಮಧವಿ ಇಲ್ದ ಉಳಿಬಾರದು. ಸತ್ತ ಮಾತು||. ಸತ್ತ ಮಾತಿಗೆಂದು ಗೆಳೆಯ. ಅತ್ತು ಕರೆದು ನೆನೆಯಬಾರದು.
ಹೆಣ್ಣು ಸಂಗಡಿಗರು:-ಸತ್ತ ಮಾತಿಗೆಂದು ಗೆಳೆಯ. ಅತ್ತು ಕರೆದು ನೆನೆಯಬಾರದು.
ಹೆಣ್ಣು:-ಉಡಿಯಕ್ಕಿ ಹಾಕು ತನಕ ನೀ ಎಲ್ಲಿದ್ದೋ ಜೋಕುಮಾರ..
ಹೆಣ್ಣು ಸಂಗಡಿಗರು:-ಉಡಿಯಕ್ಕಿ ಹಾಕು ತನಕ ನೀ ಎಲ್ಲಿದ್ದೋ ಜೋಕುಮಾರ..//ಚರಣ ೩//
ಗಂಡು:-ಚಿಂತಿ ನಿಂದ ಕಾಡಿತಲ್ಲ . ಮನಿ ಮಾರ ಮರ್ಸಿತಲ್ಲ.
ಗಂಡ ಸಂಗಡಿಗರು:-ಚಿಂತಿ ನಿಂದ ಕಾಡಿತಲ್ಲ . ಮನಿ ಮಾರ ಮರ್ಸಿತಲ್ಲ.
(ಗಂಡು:-ಚಿಂತಿ ನಿಂದ ಕಾಡಿತಲ್ಲ . ಮನಿ ಮಾರ ಮರ್ಸಿತಲ್ಲ. ಯಾಕ. ಆ ಪುಷ್ಯ ಮಾಸದಾಗ..
ಆ ಪುಷ್ಯ ಮಾಸ ದಾಗ ನಮ್ಮ ಮೊದಲ ಬೆಟ್ಟಿ. ನೀ ಕೈಗೆ ತಂದು ಕೊಟ್ಟಿ. ಆ ಮೊದಲ ಪ್ರೇಮ ಚೀಟಿ
ಮಾಗ ಮಾಸ ದಾಗ ಆ ಪ್ರೀತಿ ಬೆಳೆದು ಕಟ್ಟಿ. ಇರಇಲ್ಲ ಕೇಳ ಹುಡುಗಿ ಈ ನನ್ನ ಮನಸು ಗಟ್ಟಿ. ಪಾಲ್ಗೊಣದಾಗ ಬಂದು ನೀ ನನಗ ಮಾತು ಕೊಟ್ಟಿ. ಆ ಚೈತ್ರ ಮಾಸ ದಾಗ ವಸಂತ ರಾಗ ಹಾಡಿ. ಕೈಯಾಗ ಕೈಯ ಹಾಕಿ ನೀ ಬರುತಿನಂದಿ ಜೋಡಿ. ವೈಶಾಕದಾಗ ಹುಡುಗಿ ನೀ ಮಾಡಿದಲ್ಲ ಮೋಡಿ. ಆ ಜೇಷ್ಠ ಮಾಸದಾಗ ಮಳೆಗಾಲ ಬಂತು ಕೂಡಿ. ಆಶಾಡದಾಗ ಹುಡುಗಿ ಆಗೈತಿ ಏನ ದಾಡಿ. ಯಾಕ ಓಡಲಿಲ್ಲ ಮುಂದ ನಮ್ಮ ಪ್ರೀತಿ ಗಾಡಿ. ಶ್ರಾವಣ ಮಾಸದಾಗ ಹೊರ ಬಿತ್ತು ಪ್ರೀತಿ ರಾಡಿ. ಅಸ್ವಿಜ ಮಾಸದಾಗ ನಿಮ್ಮಪ್ಪ ಬಂದ ಓಡಿ. ನೀ ಇದ್ದಿಲ್ಲ ಹುಡುಗಿ ಆಗ ನನ್ನ ಜೋಡಿ. ಬ್ಯಾರೆಯ ಗಂಡ ನಿನಗ ನಿಮ್ಮಪ್ಪ ಆಗ ಹುಡುಕಿ. ಬಂದು ಮುಚ್ಚಿ ದಲ್ಲ ಆ ನಮ್ಮ ಪ್ರೀತಿ ಕಿಡಕಿ. ಕಾರ್ತಿಕ ಮಾಸ ದಾಗ ನೀ ಮದವಿ ಆಗೋಣಂದಿ ನಿಮ್ಮ ಅಪ್ಪ ಸುದ್ದಿ ತಿಳಿದ ಕೂಡಿ ಶ್ಯಾನ ಊರ ಮಂದಿ ಆ ಹಸಿರು ಬಳೆಯ ನೋಡಿ ಈ ಮನಸು ಆತ ಚಿಂದಿ. ಮಾರ್ಗಶಿರ ಮಾಸದಾಗ ಹುಡುಗಿ ಊರಿಗೆ ಬಂದಿ ಹ್ವಾದ ವರ್ಷ ಹ್ಯಾಂಗಿದ್ದಿ ಈಗ ಹೆಂಗ ಆದಿ..
ಗಂಡು ಸಂಗಡಿಗರು:-ಹ್ವಾದ ವರ್ಷ ಹ್ಯಾಂಗಿದ್ದಿ ಈಗ ಹೆಂಗ ಆದಿ..ಈಗ ಹೆಂಗ ಆದಿ..
ಗಂಡು:-ಏ.. ಹ್ವಾದ ವರ್ಷ ಹ್ಯಾಂಗಿದ್ದಿ ಈಗ ಹೆಂಗ ಆದಿ.... ಒಂದು ಹಡೆದಮ್ಯಾಲ ಹುಡುಗಿ ಬಹಳ ಸ್ವರಗಿ ಹ್ವಾದಿ.
ಗಂಡು ಸಂಗಡಿಗರು:-ಒಂದು ಹಡೆದಮ್ಯಾಲ ಹುಡುಗಿ ಬಹಳ ಸ್ವರಗಿ ಹ್ವಾದಿ.
ಗಂಡು:-ಚಿಂತಿ ನಿಂದ ಕಾಡಿತಲ್ಲ || ಮಣಿಮಾರ ಮರಸಿತಲ್ಲ. ಬರಸಿಡಿಲು..ಬರಸಿಡಿಲು.
ಬರಸಿಡಿಲು ಬಡಿದ ಮ್ಯಾಲ.. ಪ್ರೀತಿ ಸುಟ್ಟು ಬೂದಿಯಾಯಿತಲ್ಲ.
ಹೆಣ್ಣು ಸಂಗಡಿಗರು:-ಉಡಿಯಕ್ಕಿ ಹಾಕು ತನಕ ಎಲ್ಲಿದ್ದೋ ಜೋಕುಮಾರ..||2||
ಹೆಣ್ಣು:-ಉಡಿಯಕ್ಕಿ ಹಾಕು ತನಕ ಎಲ್ಲಿದ್ದೋ ಜೋಕುಮಾರ..
ಹೆಣ್ಣು ಸಂಗಡಿಗರು:-ಉಡಿಯಕ್ಕಿ ಹಾಕು ತನಕ ಎಲ್ಲಿದ್ದೋ ಜೋಕುಮಾರ..
ಹೆಣ್ಣು:-ಉಡಿಯಕ್ಕಿ ಹಾಕು ತನಕ ನೀ ಎಲ್ಲಿದ್ದೋ ಜೋಕುಮಾರ. ಮದವಿಯಾದ...ಮದವಿಯಾದ..
ಏ ಮದುವೆಯಾದ ಗಂಡನ ಹೊರತ ನೆನಪಿಲ್ಲೋ ಯಾರ ಹೆಸರ.
ಹೆಣ್ಣು ಸಂಗಡಿಗರು:-ಮದುವೆಯಾದ ಗಂಡನ ಹೊರತ ನೆನಪಿಲ್ಲೋ ಯಾರ ಹೆಸರ.
ಹೆಣ್ಣು:-ಮದುವೆಯಾದ ಗಂಡನ ಹೊರತ ನೆನಪಿಲ್ಲೋ ಯಾರ ಹೆಸರ.
ಹೆಣ್ಣು ಸಂಗಡಿಗರು:-ಮದುವೆಯಾದ ಗಂಡನ ಹೊರತ ನೆನಪಿಲ್ಲೋ ಯಾರ ಹೆಸರ.//ಚರಣ ೪//